|| श्रीवीरविठ्ठलो विजयतेतराम् ||

ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು 500 ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದಕ್ಕೆ ಯಜ್ಞ ದೀಕ್ಷೆಯನ್ನು ನೀಡಿದರು

Home / ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು 500 ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದಕ್ಕೆ ಯಜ್ಞ ದೀಕ್ಷೆಯನ್ನು ಕೊಟ್ಟರು

ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು 500 ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದಕ್ಕೆ ಯಜ್ಞ ದೀಕ್ಷೆಯನ್ನು ಕೊಟ್ಟರು

ಭಾವಿ ಪರ್ಯಾಯ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ|ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು, ಕೋಟಿ ಗೀತಾ ಲೇಖನ ಯಜ್ಞದ ಪ್ರಯುಕ್ತ, ,500 ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದಕ್ಕೆ ಯಜ್ಞ ದೀಕ್ಷೆಯನ್ನು ಕೊಟ್ಟರು.
ಶ್ರೀ ಸತ್ಯ ಸಾಯಿ ವಿದ್ಯಾಕೇಂದ್ರದವರು ತಮ್ಮ ಚೊಕ್ಕಾಡಿ ಗ್ರಾಮದ ಶಾಲೆಯಲ್ಲಿ ಭವ್ಯವಾಗಿ ಏರ್ಪಡಿಸಿದ್ದ ಈ ಸಮಾರಂಭಕ್ಕೆ ಬಿ ಆರ್ ವಾಸುಕಿ ಅವರು ಪುಸ್ತಕಗಳನ್ನು ಪ್ರಾಯೋಜಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಭಗವದ್ ಗೀತೆಯು ಕೇವಲ ಹಿಂದೂಗಳ ಧರ್ಮಗ್ರಂಥವಾಗಿ ಸೀಮಿತವಾಗಿಲ್ಲ, ಅದು ಮಾನವನಾಗಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಯಶಸ್ಸಿನ ಗುಟ್ಟು ತಿಳಿಸುವಂತಹ ಗ್ರಂಥ. ಭಗವದ್ ಗೀತೆಯು ನಮ್ಮ ಜೀವನದ ಪಯಣದಲ್ಲಿ ದಾರಿ ದೀಪ ಇದ್ದಂತೆ. ಅದು ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತದೆ. ಭಗವದ್ ಗೀತೆ ಓದುವುದರಿಂದ ಮನಸ್ಸು ಧೃಡವಾಗಿ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಭಗವದ್ ಗಿತೆಯನ್ನು ಓದಿದರೆ, ನಮ್ಮ ಜೀವನವನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಂದೇಶವಿತ್ತರು.

Recent Articles.

Share this article on

The main branch of this Matha is in the village by name Puthige. The idol of Vithal with Rukmini and Satyabhama gifted to the first pontiff Shri Upendra Tirtha by the Acharya Madhva is worshipped here. 

Copyright 2023 © All Right Reserved Design by Shri Puthige Matha